ಕ್ರೇಕ್, ಜಾರ್ಜ್ ಲಿಲ್ಲಿ

	1798-1866. ಸಾಹಿತ್ಯ ಚರಿತ್ರೆಕಾರ. ಹುಟ್ಟಿದ್ದು ಫೈಪ್‍ಷೈರ್‍ನ ಕೆನೋವೆಯಲ್ಲಿ. ಸೇಂಟ್ ಆಂಡ್ರ್ಯೂಸ್‍ನಲ್ಲಿ ವ್ಯಾಸಂಗ ಮಾಡಿ 1824ರಲ್ಲಿ ಲಂಡನ್ನಿಗೆ ತೆರಳಿದ. ಅಲ್ಲಿ ವಿಸ್ತಾರಗೊಳ್ಳುತ್ತಿದ್ದ 'ಉಪಯುಕ್ತ ಜ್ಞಾನದ ಬಗ್ಗೆ ಬೇಕಾದಷ್ಟು ಲೇಖನಗಳನ್ನು ಬರೆದ. 1849ರಲ್ಲಿ ಬೆಲ್ಫಾಸ್ಟ್‍ನಲ್ಲಿ ಆಂಗ್ಲ ಸಾಹಿತ್ಯ ಮತ್ತು ಚರಿತ್ರೆಯ ಪ್ರಾಧ್ಯಾಪಕನಾಗಿ ನೇಮಕಗೊಂಡ. ದಿ ಪರ್‍ಸ್ಯೂಟ್ ಆಫ್ ನಾಲೆಜ್ ಅಂಡರ್ ಡಿಫಿಕಲ್ಟೀಸ್ (1831), ಹಿಸ್ಟರಿ ಆಫ್ ಬ್ರಿಟಿಷ್ ಕಾಮರ್ಸ್ (1844), ಹಿಸ್ಟರಿ ಆಫ್ ಇಂಗ್ಲಿಷ್ ಲಿಟರೇಚರ್ ಅಂಡ್ ದಿ ಇಂಗ್ಲಿಷ್ ಲಾಂಗ್ವೇಜ್ (1861) - ಈತನ ಮುಖ್ಯ ಗ್ರಂಥಗಳು. ಸ್ಪೆನ್ಸ್‍ರ್ ಮತ್ತು ಬೇಕನ್‍ರನ್ನು ಕುರಿತೂ ಬರೆದಿದ್ದಾನೆ.	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ